ಈ ಮೊಬೈಲ್ ಫೋನ್ನ್ನು ಖರೀದಿ ಮಾಡಿದಲ್ಲಿ ಅದರ ಬಾಕ್ಸ್ನಲ್ಲಿ ಮೊಬೈಲ್ ಫೋನ್, ರಬ್ಬರ್ ಫೀನಿಷ್ಡ ಬ್ಯಾಕ್ ಕವರ್, ಸಿಮ್ ಇಜೆಕ್ಷನ್ ಪಿನ್, 67 ವ್ಯಾಟ್ ಫಾಸ್ಟ್ ಚಾರ್ಜ್ರ್, ಟೈಪ್ ಸಿ ಚಾರ್ಜ್ರ್ ಕೇಬಲ್, ಯೂಸರ್ ಮ್ಯಾನ್ಯೂವಲ್ ಸಿಗುತ್ತವೆ. ಬಾಕ್ಸ್ ಮೇಲಿನ ಹೆಸರೆ ತಿಳಿಸುವ ಹಾಗೆ ಈ ಮಾಡೆಲ್ನ ಮೊಬೈಲ್ ಫೋನ್ಗಳು ಲೈಕಾ ಎಂಬ ಕಂಪನಿಯ ಬ್ರಾಂಡಿಂಗ್ಯಿಂದ ಇವುಗಳ ಕ್ಯಾಮರಾಗಳನ್ನು ಪ್ರೊಡಕ್ಷನ್ ಮಾಡಲಾಗಿದೆ.
ಮೊದಲು ಮೊಬೈಲ್ ಫೋನ್ ಬಗ್ಗೆ ತಿಳಿಸಿಬಿಡುತ್ತೇನೆ. ಈ ಮೊಬೈಲ್ ಫೋನ್ನ್ನು ಕೇವಲ ಒಂದು ಕೈಯಲ್ಲಿ ಬಳಸಬಹುವುದು. ಇದರ ಭಾರ ಕೇವಲ 200ಗ್ರಾಂ ಮಾತ್ರ ಇರುತ್ತದೆ. ದಪ್ಪ 8.17 ಎಂ.ಎಂ ಮಾತ್ರವಿದ್ದು ಘೋರಿಲ್ಲಾ ಗ್ಲಾಸ್ 7ಐ ಸಿಗ್ತಾ ಇದೆ. ಕ್ಯಾಮರಾ ಡಿಸೈನ್ ವಿಭಿನ್ನವಾಗಿದೆ ಹಾಗೂ ಲೈಕಾ ರವರ ಬ್ರಾಂಡಿಂಗ್ಯಿಂದ ತಯಾರಾಗಿದೆ. ಡ್ಯೂಲ್ ಫ್ಲಾಷರ್ ಇದೆ. ಎರಡು ನ್ಯಾನೋ ಸಿಮ್ಗಳನ್ನು ಉಪಯೋಗಿಸಬಹುದು. ಪ್ಲಾಸ್ಟಿಕ್ ಫ್ರೇಮ್ಯಿಂದ ಮಾಡಲಾಗಿದೆ. ಹೆಡ್ಫೋನ್ ಜಾಕ್ ಇರುವುದಿಲ್ಲ.
6.59” 1.5K resolution ಅಮೋಲ್ಡ್ ಡಿಸ್ಪಲೇ ಇದೆ. ಹೆಚ್ಚಿನ ಬ್ರೈಟ್ನೆಸ್ನ್ನು ಒದಗಿಸಲಾಗಿದೆ. ಸಪ್ಪೋರ್ಟ್ 12 ಬಿಟ್, ಡೋಲ್ಬಿ ವರ್ಸನ್, ಹೆಚ್ಡಿಆರ್+10 ಮತ್ತು 3840 ಹಜ್ ಪಿಡ್ಬಲ್ಯೂ ಡೈಮಿಂಗ್. ಐ ಕೇರ್ ಶೀಲ್ಡ್ ಇದೆ. ಡಿಸ್ಪ್ಲೇ ಚೆನ್ನಾಗಿದೆ. ಇದರಲ್ಲಿ ಗಮನ ಸೆಳೆಯೋದು ಕ್ಯಾಮರ್ ವರ್ಕ್ ಮೇನ್. ಕ್ಯಾಮರಾವನ್ನು ಶೆವೋಮಿರವರು ಲೈಕಾ ರವರ ಜೊತೆ ಪಾರ್ಟ್ನರ್ ಆಗಿ ಬಿಲ್ಡ್ ಮಾಡಿದ್ದಾರೆ. ಇದರಲ್ಲಿ ಮೂರು ಕ್ಯಾಮರಾ ಇರುತ್ತವೆ.
ಲೈಕಾ ಮೇನ್ ಕ್ಯಾಮರಾ : 50 ಎಂ.ಪಿ ಎಫ್/1.8 ಓಐಎಸ್. ಈ ಒಂದು ಕ್ಯಾಮರಾದಂದ ಕಡಿಮೆ ಬೆಳಕಲ್ಲು ಒಳ್ಳೆಯ ಫೋಟೋಳನ್ನು ಕ್ಲಿಕ್ ಮಾಡಿಕೊಳ್ಳಬಹುದು. ಈ ಕ್ಯಾಮರದಲ್ಲಿ ಪೋರ್ಟ್ರೇಟ್ ಫೋಟೋಗಳು ತುಂಬಾ ಚೆನ್ನಾಗಿ ಬರುತ್ತವೆ. ಲೈಕಾ ಪೆರಿಸ್ಕೋಪ್ ಟೆಲಿಪೋಟೋ ಕ್ಯಾಮರಾ: 50ಎಂ.ಪಿ ಎಫ್/3.0 ಈ ಕ್ಯಾಮರಾದಿಂದ 5x ಆಪ್ಟಿಕಲ್ ಜೂಮ್ ಫೋಟೋಗಳನ್ನು ಸೆರೆಹಿಡಿಯಬಹುದು. ಲೈಕಾ ಅಲ್ಟ್ರಾ ವೈಡ್ ಕ್ಯಾಮಾರಾ: ಇದು 12 ಎಂ.ಪಿ ಎಫ್/2.2 ಕ್ಲಾರಿಟಿ ತುಂಬಾ ಚೆನ್ನಾಗಿದೆ.
ತುಂಬಾ ವಾರ್ಮ ಫೋಟೋಗಳನ್ನು ನಾವು ಪಡೆಯಬಹುದು. ಫೋಟೋಳು ಫಿಲ್ಡ್ನಲ್ಲಿ ತೆಗೆದ ರೀತಿ ಬರುತ್ತವೆ. ಈ ಮೊಬೈಲ್ ಒಂದು ಒಳ್ಳೆಯ ಕ್ಯಾಮರಾ ಫೋನ್ ಆಗುವ ಎಲ್ಲಾ ಲಕ್ಷಣಗಳು ಇವೆ.
ಇವುಗಳಲ್ಲದೇ ಫ್ರಂಟ್ ಕ್ಯಾಮರಾ ಕೂಡಾ 32 ಎಂ.ಪಿ ಎಫ್/2.2 ಸೆಲ್ಫಿ ಕ್ಯಾಮರಾ ಇರುತ್ತದೆ.
ಈ ಫೋನ್ನ ಗ್ಯಾಲರಿಯಲ್ಲಿ ರಿಲ್ಸ್ಗಳನ್ನು ಎಡಿಟ್ ಮಾಡುವ ಸೌಲಭ್ಯವನ್ನು ನೀಡಿದ್ದಾರೆ. ನೀವು ಸುಲಭವಾಗಿ ರೀಲ್ಸ್ಗಳನ್ನು ಗ್ಯಾಲರಿಯಲ್ಲಿಯೇ ಎಡಿಟ್ ಮಾಡಬಹುದು.
850 ಅಲ್ಟ್ರಾ ಪ್ರೋಸಸರ್ ಇರುತ್ತದೆ. 12 ಜಿಬಿ ರಾಮ್ ಅದರ ಹೆಸರು ಎಲ್ಪಿಡಿಡಿಆರ್5ಎಕ್ಸ್. ರ್ಯಾಮ್ ಮತ್ತು ಸ್ಟೋರೆಜ್ ನೀಡುವುದರಲ್ಲಿ ಯಾವುದೇ ಹಂತದಲ್ಲಿ, ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದಿಲ್ಲ. ಗೇಮಿಂಗ್ಗೆ 90 ಎಪ್ಪಿಎಸ್ ಇರುವುದರಿಂದ ಎಲ್ಲಾ ಗೇಮ್ಗಳು ಹಾಗೂ ಅಪ್ಲಿಕೇಷನ್ಗಳು ಸ್ಮೂತಾಗಿ ರನ್ ಆಗುತ್ತವೆ. 
ಅಂಡ್ರಾಡ್ 16 ಮಾದರಿಯ ಹೈಪರ್ ಓಎಸ್ 3.0 ನ್ನು ಉಪಯೋಗಿಸಲಾಗಿದೆ. ಯಾವುದೇ ಬಗ್ ಇಲ್ಲ ಲ್ಯಾಗಿಂಗ್ ಇರುವುದಿಲ್ಲ.
ಈ ಫೋನ್ನಲ್ಲಿ ಸ್ಟಿರಿಯೋ ಸ್ಪೀಕರ್ಸ್ ವಿತ್ ಡಾಲ್ಬಿ ಅಟ್ಮೋಸ್ ಸೌಂಡ್ ತುಂಬಾ ಚೆನ್ನಾಗಿ ಇರುತ್ತದೆ. ಇದರಲ್ಲಿ ಸಿಲಿಕಾನ್ ಕಾರ್ಬನ್ ಬ್ಯಾಟರಿ 6500 ಎಂ.ಎ.ಹೆಚ್ ಬ್ಯಾಟರಿಯಿಂದ ಫೋನ್ 1 ದಿನದಿಂದ 2 ದಿನದವರೆಗೆ ಆರಾಮಾಗಿ ಚಾರ್ಜ್ ಬರುತ್ತದೆ. 67 ವ್ಯಾಟ್ ಕ್ವಿಕ್ ಚಾರ್ಜ್ರನಿಂದ ಫೋನ್ ಬೇಗೆ ಚಾರ್ಜ್ ಆಗುತ್ತದೆ.
ಅದಲ್ಲದೇ ಇದರಲ್ಲಿ ವೈಪೈ 6 ಇ, ಬ್ಲೂಟೂತ್ 5.4. ಮತ್ತು ಇದರಲ್ಲಿ ಇನ್ಡಿಸ್ಪ್ಲೆ ಫಿಂಗರ್ಪ್ರಿಂಟ್ ಸೆನ್ಸಾರ್ ಇರುವುದರಿಂದ ಫೋನ್ನ್ನು ಕೂಡಲೇ ಅನ್ಲಾಕ್/ಲಾಕ್ ಮಾಡಬಹುದು.
ಇನ್ಸ್ಟಾ, ವಾಟ್ಸ್ಪ್, ಫೇಸ್ಬುಕ್, ಸ್ನಾಪ್ಚಾಟ್ ಅಪ್ಲಿಕೇಷನ್ಗಳಿಗೆ ಈ ಮೊಬೈಲ್ ಪ್ರಿಮಿಯಂ ಎಕ್ಸಪೆರಿಯನ್ಸ್ ನೀಡುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಪ್ರೋಸಸರ್ ಆನ್ ಮಾಡಿದ ತಕ್ಷಣ ಆಪ್ಸ್ಗಳನ್ನು ಬೇಗ ಸ್ವಚಿಂಗ್ ಮಾಡುತ್ತದೆ.
ಈ ಮೊಬೈಲ್ ಪರ್ಫೆಕ್ಟ್ ಆಗಿದೆ,ಎಕ್ಸಲೆಂಟ್ ಡಿಸೈನ್, ಟೆಲಿ ಫೋಟೋ ಕ್ಯಾಮರಾ, ಪವರ್ಫುಲ್ ಪ್ರೊಸಸರ್ ಮತ್ತು ಬಿಗ್ ಬ್ಯಾಟರಿ ಬ್ಯಾಕ್ಪ್ನಿಂದ ಸಮೃದ್ಧವಾಗಿದೆ.
ಈ ಮಾದರಿಯ ಶವೋಮಿರವರು ಎರಡು ಮಾದರಿಯ ಬಲೆಗಳಲ್ಲಿ ಬಿಟ್ಟಿದ್ದಾರೆ ಅವುಗಳೆಂದು 1] 59,999/- ಮತ್ತು 64,999/-ಗಳಲ್ಲಿ ಬಿಟ್ಟಿದ್ದಾರೆ. ಖರೀದಿ ಮಾಡಲು ಇಚ್ಛಿಸುವವರು ನಾವು ಇಲ್ಲಿ ಕೊಟ್ಟಿರುವ, ಚರ್ಚಿಸಿದ ಹಾಗೂ ತಿಳಿಸಿರುವ ಎಲ್ಲಾ ಅಂಶಗಳನ್ನು ಸ್ವತಃ ತಾವೇ ದೃಢಪಡಿಸಿಕೊಂಡು ಖರೀದಿಸಲು ತಿಳಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಶವೋಮಿಯ ದೃಢೀಕೃತ ವೆಬ್ ಪೇಜ್ನಿಂದ ಮಾಹಿತಿಯನ್ನು ಪಡೆದುಕೊಳ್ಳಲು ಕೋರಿದೆ.